ಅಧ್ಯಾಯ 1
ಜನವರಿ 29 ನೇ ತಾರೀಕು ಬಧವಾರದಂದು ಮಧ್ಯಾಹ್ನ 3:57 ಕ್ಕೆ ಗಡಿಯಾರ ನಿಂತಿತು. ನದಿಗಳ ಎರಡೂ ಕಡೆಗಳಲ್ಲಿ ಹರಡಿದ, ವಿಸ್ತಾರವಾದ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ನಾನು ನನ್ನ ಟರ್ಮ್ ಪೇಪರ್ ನ ಸಂಶೋಧನೆಗೆ ಹೋಗಲು ಸಮಯವಿದೆಯೇ ಎಂಬ ಚಿಂತೆ ಬಿಟ್ಟರೆ ಅದು ಎಂದಿನಂತೆಯೇ ಒಂದು ಸಾಧಾರಣ ದಿನವಾಗಿತ್ತು. ಇದ್ದಕ್ಕಿದ್ದಂತೆಯೇ ಸಮಯ ಲೋಪವಾದ ಭಾವನೆಯನ್ನು ಬಿಟ್ಟರೆ ಯಾವುದೇ ತರಹದ ನಷ್ಟವಾಗಲೀ, ಅಗಾಧವಾದ ಅಂಜಿಕೆಯಾಗಲೀ ಇರಲಿಲ್ಲ, ಏಕೆಂದರೆ ಈ ಎರಡೂ ಭಾವನೆಗಳೊಂದಿಗೆ ನಾನು ನನ್ನ ಇಡೀ ಅಸ್ತಿತ್ವವನ್ನು ಕಳೆದಿದ್ದೇನೆ. ಗೋಡೆಯ ಗಡಿಯಾರ ಮುಂದೆ ಭವಿಷ್ಯದೆಡೆಗೆ ಸಾಗಿರುವುದನ್ನು ಮನಗಂಡು ನನ್ನ ಕೈಗಡಿಯಾರ ಮಧ್ಯಾಹ್ನ 3:57 ಘಂಟೆಗೆ ನಿಂತಿತ್ತು ಎಂದರಿವಾಗುವ ಹೊತ್ತಿಗೆ, ನಾನು ನನ್ನ ಕೈಗಡಿಯಾರವನ್ನು ಇಪ್ಪತ್ತುಬಾರಿ ನೋಡಿಕೊಂಡಿದ್ದೆ.
ನಗರದ ಬಸ್ಸು ಬೋರ್ಡಿಂಗ್ಹೌಸ್ ಪಾರ್ಕ್ ಕಟ್ಟಡವನ್ನು ಮೇಲೇರಿ ನಿಂತ ಕೋಟೆಯಂತಿದ್ದ ಕೆಂಪು ಇಟ್ಟಿಗೆಯ ಜವಳಿ ಕಾರ್ಖಾನೆಗಳನ್ನು ಹಾದುಹೋಗುತ್ತಿರುವಾಗ ನಾನು ಕಿಟಕಿಯಿಂದಾಚೆ ನೋಡುತ್ತಿದ್ದೆ. ಜಾಲರಿಯೊಳಗೆ ದೇವತೆಯ ಕಣ್ಣೀರಿನಂತೆ ಮಿನುಗುವ ಸೂಕ್ಷ್ಮವಾದ ಮಂಜುಬಿಳಲುಗಳ ಪರದೆಯೊಳಗೆ ಅವಿತುಕೊಂಡ ಗಾಢ ಹಸಿರಿನ ಕ್ರೀಡಾಮಂಟಪ ಪರಿತ್ಯಜಿಸಲ್ಪಟ್ಟು ನಿಂತಿತ್ತು. ಹವಾಮಾನ ಇನ್ನೂ ಆಚೆ ಕುಳಿತುಕೊಳ್ಳುವಷ್ಟು ಬೆಚ್ಚಗಿದ್ದಾಗ ಜಾಷ್ ಒಂದು ಸಲ ನನ್ನನ್ನು ಒಂದು ಉಚಿತ ಸಂಗೀತ ಕಛೇರಿಗೆ ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ನನ್ನಿಂದ ನಡುವಿನ ದಾರಿಗೆ ಅಡ್ಡಲಾಗಿ ಕುಳಿತಿದ್ದ ಸೊರಗಿ ಸುಕ್ಕುಗಟ್ಟಿದ್ದ ವಿಯಟ್ನಾಂ ಮನುಷ್ಯ ನಾನು ಆತನನ್ನು ದಿಟ್ಟಿಸಿ ನೋಡುತ್ತಿದ್ದೀನೆಂದು ಆತ ಯೋಚಿಸಬಾರದೆಂದೆಣೆಸಿ ನಾನು ನನ್ನ ಮುಷ್ಠಿಯನ್ನು ಎದೆಯ ಮೇಲೆ ಬಿಗಿಹಿಡಿದು ನನ್ನೆದುರಿನ ಕಿಟಕಿಯಿಂದಾಚೆ ಸಿಟಿ ಮ್ಯಾಗ್ನೆಟ್ ಸ್ಕೂಲ್ ಕಡೆಗೆ ಬಹು ಆಸಕ್ತಿಯಿಂದ ನೋಡತೊಡಗಿದೆ. ಬಸ್ಸು ಮೂಲೆ ತಿರುಗಿ ಕಛೇರಿ ಪ್ರದೇಶ ಹಾಗೂ ಮಾರಾಟಮಳಿಗೆಗಳನ್ನೊಳಗೊಂಡಿದ್ದ ಜಾಗದಲ್ಲಿ ಅನುಚಿತವಾದ ಮೂರಂತಸ್ತಿನ ವಸತಿಮನೆಗಳ ಸಾಲನ್ನು ದಾಟಿತ್ತು. ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಮಹಿಳೆಯರ ಇಡೀ ಪೀಳಿಗೆ ಹೇಗೆ ತಮ್ಮ ಕೃಷಿಕ್ಷೇತ್ರಗಳನ್ನು ತೊರೆದು ಬಟ್ಟೆ ಗಿರಣಿಯಲ್ಲಿ ಕೆಲಸ ಮಾಡತೊಡಗಿದರೋ ಅದೇ ರೀತಿಯಲ್ಲೇ ಯುವ ಜನರು ಇಂದು ಎರಡು ನದಿಗಳನ್ನೂ ವ್ಯಾಪಿಸಿದ ರಾಜ್ಯದ ವಿಶ್ವವಿದ್ಯಾನಿಲಯಕ್ಕೆ ಹಾಜರಾಗಲು ತಮ್ಮ ಸಣ್ಣ ಪಟ್ಟಣಗಳನ್ನು ತ್ಯಜಿಸಿದರು. ಈಗಿನ ಹಾಗೆಯೇ ಪೂರ್ವದಲ್ಲೂ ಸಹ ಕಾಲುವೆಯ ಅಕ್ಕಪಕ್ಕದಲ್ಲಿರುವ ಬೃಹತ್ ಇಟ್ಟಿಗೆಯ ಕಟ್ಟಡಗಳಲ್ಲಿ ಉದ್ಯೋಗಗಳಿದ್ದರೂ ಇಂದಿನ ದಿನಗಳಲ್ಲಿ ಕಾರ್ಖಾನೆಗಳು ಉನ್ನತ ತಂತ್ರಜ್ಞಾನದ ಹಾಸು ಮತ್ತು ನೇಯ್ಗೆ ವರ್ಗದ ತಂತ್ರಶಾಸ್ತ್ರ, ವಿಜ್ಞಾನ ಹಾಗೂ ಇಂಜಿನಿಯರಿಂಗ್ ಉದ್ಯೋಗಗಳನ್ನು ಉತ್ಪಾದಿಸುತ್ತಿದ್ದವು.
ನನ್ನ ಗಡಿಯಾರದ ಜೊತೆ ಪರದಾಡುತ್ತ, ನನ್ನ ನಿಶ್ಚಯ ವಿವೇಚನಾಯುಕ್ತ ವಾದದ್ದೆಂದು ನನಗೆ ನಾನೇ ಹೇಳಿಕೊಂಡೆ. ನನ್ನ ತಾಯಿ ಬಿದ್ದ ಚಿಕ್ಕ ವಯಸ್ಸಿನ ಮದುವೆ ಮತ್ತು ತಪ್ಪಿಸಿಕೊಳ್ಳಲಾಗದಷ್ಟು ಮಕ್ಕಳಂತಹ ಜಾಲದಲ್ಲಿ ಬೀಳುವುದನ್ನು ತಪ್ಪಿಸಿಕೊಳ್ಳಲು ಹಾಗೂ ಉತ್ತಮ ಮಟ್ಟದ ಜೀವನವನ್ನರಸಿ ನಾನು ಈ ನಗರಕ್ಕೆ ಬಂದೆ. ನನ್ನ ಉದ್ಯೋಗ-ಪಾಠದಲ್ಲಿ ನಾನು ಮೊದಲನೆಯ ದರ್ಜೆಯ ವಿದ್ಯಾರ್ಥಿನಿಯಾಗಿದ್ದೆ. ನನಗೆ ಕೇವಲ ಇಪ್ಪತ್ತೆರಡು ವರ್ಷಗಳು. ನನ್ನ ಮುಂದೆ ನನ್ನ ಇಡೀ ಜೀವನ ನಕ್ಷೆಯಾಗಿ ಪಸರಿಸಿತ್ತು. ಹಾಗಿದ್ದರೂ ಏಕೆ, ಅದೇಕೆ, ಸೂಕ್ತವಾಗಿರುವುದು ಇಷ್ಟೇಕೆ ನೋಯುವುದು?
ನಾನು ಯು-ಮ್ಯಾಸ್ ಲೊವೆಲ್ ನಲ್ಲಿದ್ದ ಇಡೀ ನಾಲ್ಕುವರ್ಷಗಳಲ್ಲಿ ವುಲ್ವರ್ತ್ ಇರಲಿಲ್ಲವಾದರೂ ಬಸ್ ನನ್ನನ್ನು ವುಲ್ವರ್ತ್ ಕಟ್ಟಡದಲ್ಲಿ ಇಳಿಸಿತು. ಬೇಗ ಮನೆಗೆ ಹೋಗಿ ತಮ್ಮ ಕುಟುಂಬಗಳೊಡನೆ ಪುನರ್ಮಿಲನಕ್ಕಾಗಿ ತವಕಿಸುತ್ತಿರುವ ಸಿಡುಕು ಚಾಲಕರಿಂದ ರಸ್ತೆಗಳು ತುಂಬಿದ್ದವು. ಆಗಲೇ ಸಂಧ್ಯಾಕಾಲಕ್ಕೆ ಮುಚ್ಚಲಾರಂಭಿಸಿದ ಪೇಟೆಯೊಳಗೆ ಹಿಮರಾಶಿಯಲ್ಲಿ ನಿಂತ ನನ್ನನ್ನು ತೊರೆದು ಬಸ್ ಹೊರಟುಹೋಯಿತು. ಹಸಿರು ಕಿಲುಬಿನ ತಾಮ್ರದ ಕಂಬದ ಮೇಲೆ ಕುಳಿತ 3:45 ಸೂಚಿಸುತ್ತಿದ್ದ ಒಂದು ದೊಡ್ಡ ಹಸಿರು ಗಡಿಯಾರದ ಮೇಲೆ ಕಾಂತಿಹೀನವಾಗುತ್ತಿದ್ದ ಬಿಸಿಲು ಬಿದ್ದಿತ್ತು. ಇಲ್ಲ, ಇನ್ನು ಹನ್ನೆರಡೇ ನಿಮಿಷಗಳು! ಗತಕಾಲ ಸಂದಿದೆ. ನನ್ನ ಕೋಟನ್ನು ನನ್ನ ಕತ್ತಿಗೆ ಬಿಗಿಹಿಡಿದು ನನ್ನ ಕೈಗಡಿಯಾರವನ್ನು ತಿರಿಚುತ್ತ ನನ್ನ ಬೆನ್ನು ತಿರುಗಿಸಿ ತ್ವರೆಮಾಡಿದೆನು.
ನಾನು ಸೆಂಟ್ರಲ್ ಸ್ಟ್ರೀಟ್ ಮೇಲೆ ನಡೆಯತ್ತಿದ್ದಂತೆ ಕಾಲುದಾರಿ ಲೋಯರ್ ಪಾಟುಕೆಟ್ ಕೆನಾಲನ್ನು ದಾಟಿದಾಗ, ಕಲ್ಲುಪ್ಪಿನ ಮೇಲೆ ನನ್ನ ಪಾದರಕ್ಷೆಗಳು ಜಾರಿ ನಾನು ನನ್ನ ಬೆನ್ನ ಮೇಲೆ ಅಂಗಾತ ಬೀಳುವುದರಲ್ಲಿದ್ದೆ. ವೇಗವಾಗಿ ಸೇತುವೆಯ ಕೆಳಗೆ ಬಿದ್ದು ತೇಲುವ ಗುಂಪುಗುಂಪಾದ ಮಂಜುಗಡ್ಡೆಗಳು ತಮ್ಮ ಮೇಲಿದ್ದ ಸ್ವಲ್ಪ ಕರಗಿದ ಹಿಮವನ್ನು ಅಪಾಯಕಾರಿ ಹೊಳೆಯುವ ಕಪ್ಪು ಹಿಮಕ್ಕೆ ಪರಿವರ್ತಿಸಿದವು. ನಾನು ಹೋಗುವ ಹಾದಿಯಿಂದ ಮೈಲಿಗಳು ಬಳಸಿಹೋಗುವ ಅನಿವಾರ್ಯತೆಯನ್ನು ತಪ್ಪಿಸಿದ ಸೇತುವೆಯನ್ನು ಛಳಿಗಾಲ ಬರುವ ಮುನ್ನ ಕಟ್ಟಿಮುಗಿಸಿದ್ದಕ್ಕೆ ನಗರಕ್ಕೆ ಕೃತಜ್ಞಳಾಗಿ ಹೊಸದಾಗಿ ಬಣ್ಣ ಹಚ್ಚಿದ ಕಂಬಿಯನ್ನು ಹಿಡಿದಿದ್ದೆ. ಏಕಮುಖ ಸಂಚಾರದ ರಸ್ತೆಗಳು, ಎರಡು ನದಿಗಳು, ಮತ್ತು ಕಾಲುವೆಗಳ ಜಾಲಬಂಧಗಳು ಪ್ರಧಾನವಾಗಿರುವ ನಗರದಲ್ಲಿ ಈ ಅಂತರಗಳನ್ನು ನೀವು ಅತ್ಯಂತ ನಿಕಟವಾದ ಸೇತುವೆಯನ್ನು ದಾಟಲು ಎಷ್ಟು ದೂರ ನಡೆಯಬೇಕೆನ್ನುವುದರಿಂದ ಅಳೆಯಬಹುದೇ ಹೊರತು ಕಾಗೆ ಹಾರುವ ದೂರದ ಮಾಹಿತಿಯಿಂದಲ್ಲ.
ಮ್ಯಾಪ್ ಕ್ವೆಸ್ಟ್ ಸೂಚಿಸಿದ ನನ್ನ...